‘ಎ’ ಕ್ಲಾಸ್ ‘ಡವ್’ ಸಿನಿಮಾ
Posted date: 09 Thu, Jul 2015 – 08:30:07 AM

ಬಿ.ಕೆ. ಶ್ರೀನಿವಾಸ್ ಅವರ ಮಹತ್ವಾಕಾಂಕ್ಷೆಯ ‘ಡವ್’ ಸಿನಿಮಾ ಕ್ರಿಯಾಶೀಲವಾಗಿ ಸದ್ದು ಮಾಡುತ್ತಾ ಸಾಗಿ ಬಂದಿದೆ. ಇದೀಗ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಎ’ ಅರ್ಹತಾ ಪತ್ರ ನೀಡಿದೆ. ಪ್ರತಿಯೊಂದರಲ್ಲಿಯೂ ಪಕ್ಕಾ ಇರಬೇಕೆಂಬ ಆಶಯದಿಂದಲೇ ಒಂದಷ್ಟು ತಡವಾದಂತಿದ್ದ ಈ ಚಿತ್ರಕ್ಕೆ ಅಂತೂ ಬಿಡುಗಡೆಯ ಭಾಗ್ಯ ಒದಗಿ ಬಂದಂತಿದೆ.
ಬೆಂಗಳೂರು, ಕೆ.ಜಿ. ಎಫ್, ಮೈಸೂರು, ಧನುಷ್ಕೋಟಿ, ಹಾಗೂ ಇನ್ನಿತರ ಸ್ಥಳಗಳಲ್ಲಿ ‘ಡವ್’ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ. ವ್ಯಾಪಾರಿ ಚಿತ್ರ ಹಾಗೂ ಕಲಾತ್ಮಕ ಚಿತ್ರಗಳನ್ನು ಮಾಡುತ್ತಾ ಬಂದಿರುವ ಸಹೃದಯಿ ಬಿ.ಕೆ ಶ್ರೀನಿವಾಸ್ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿಟ್ಟಿದ್ದಾರೆ. ಹಲವು ಬಗೆಯ ವಿಶೇಷಗಳಿಂದ ಕೂಡಿರುವ ಈ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ ಎಂಬುದು ಅವರ ಅಭಿಪ್ರಾಯ.
ಹೆಸರಾಂತ ನಿರ್ಮಾಪಕ ಸಾರಾ ಗೋವಿಂದು ಅವರ ಪುತ್ರ ಅನೂಪ್ ಹಾಗೂ ಅದಿತಿ ರಾವ್ ಅವರ ಪ್ರಥಮ ಚಿತ್ರವಿದು.  ತರಬೇತಿ ಪಡೆದು ಶ್ರಮ ವಹಿಸಿರುವ ಅನೂಪ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಹೊರ ಹೊಮ್ಮುತ್ತಿದ್ದಾರೆ. ರಾಕೇಶ್ ಅಡಿಗ, ಮದಾಲಸ ಶರ್ಮ, ಡೇನಿಯಲ್ ಬಾಲಾಜಿ, ಅವಿನಾಶ್, ಜೈ ಜಗದೀಶ್, ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ರಂಗಾಯಣ ರಘು, ವೀಣಾ ಸುಂದರ್, ನವನೀತ,  ಕರಿ ಸುಬ್ಬು, ಮೋಹನ್, ಮಂಜು ಮಾಂಡವ್ಯ, ಉಮೇಶ್ ಕುಮಾರ್, ಬಾಬು, ಸುಧಿ, ವಿಜಯಸಾರಥಿ, ಸುನೇತ್ರ ಪಂಡಿತ್,  ವಿಕ್ಟರಿ ವಾಸು, ಮಾಂಬಳ್ಳಿ  ಹಾಗೂ ಇತರರು ಇದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ, ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಮಂಜು ಮಾಂಡವ್ಯ ಅವರ ಸಂಭಾಷಣೆ, ಮಾಸ್ ಮಾದ ಅವರ ಸಾಹಸ, ಉಮೇಶ್ ಅವರ ಮೇಲ್ವಿಚಾರಣೆ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed